![]() |
ನಿನಗಾಗೀ |
ಈ ಪ್ರೀತಿ ಒಂಥರಾ ...
ಈ ಪ್ರೀತಿ ಕೂಡಾ ಋತುವಿನ ಹಾಗೆ ...
ಇಂದು ಬಿಸಿಲಾದರೆ ನಾಳೆ ತುಂತುರು ಮಳೆಯ ಹಾಗೆ ...
ಇವುಗಳ ನಡುವೆ ಮೂಡಿದೆ ಕಾಮನಬಿಲ್ಲಿನಂತೆ ಆಸೆ ...
ಕ್ಷಣದ ಸುಖ ಮರು ಕ್ಷಣದ ವಿಷಾದ ದ ಹಾಗೆ ..
ಕರಗಿ ಹೋಗಿದೆ ಬದುಕು ...
ಒಂದು ಹಗಲು ಕನಸಿನಂತೆ...
![]() |
ನೆರಳಿನ ಆಟ |
ನಮ್ಮನ್ನು ಬಿಟ್ಟು ಹೋಗುವವರು ಯಾವಾಗಲು ನೆನಪುಗಳನ್ನು ಕೊಂದು ಹಾಕಿ ಹೋಗುತ್ತಾರೆ
ಆದರೆ ಉಳಿದು ಹೋದವರಿಗೆ ಮಾತ್ರ ಬೀಟ್ಟು ಹೋದವರ ನೆನಪುಗಳೇ ...
ಒಂದು ಶಾಪದಂತೆ ಕಾಡುತ್ತಾ ಮತ್ತೊಂದು ಕಡೆ ಬದುಕಿಗೆ ಆಸರೆಯಾಗಿ ಬಿಡುತ್ತವೆ...
ಒಂದು ಮಾಯದ ನೆನಪಿನ ಗಾಯದಂತೆ...ಅಲ್ಲವಾ ಗೆಳತೀ ...
![]() |
ರಾಗವು ನಿನ್ನದೇ |
ಗೆಳತೀ ...ನನ್ನೆದೆಯ ವೀಣೆಯ ತಂತಿಯ ಮುರಿದು ...
ಮತ್ತೆ ಯಾರದೋ ಹೃದಯದ ತಾಳಕ್ಕೆ ಶ್ರುತೀಯಾಗಲು
ನೀ ಹೊರತು ಹೋದೆ ...
ನನ್ನ ಎದೆಯಲ್ಲಿ ನಿನ್ನ ಹೆಜ್ಜೆ ಗುರುತಿನ ಜೊತೆಗೆ ನಿನ್ನ ಗೆಜ್ಜೆಯಾ ನಾದವನ್ನು ತುಂಬಿ ಹೋದೆ ...
ಗುರುತು ಅಳಿಸಿದರು ನಾದವೇ ಕಾಡುತಿದೆ ...
ನಿನ್ನ ಒಲವೇ ಮಿಡಿಯುತಿದೆ...
ಒಂದು ಅಪಸ್ವರದಂತೆ...
ಇಂತಿ ನಿನ್ನ ಪ್ರೀತಿಯ ..
ಅನ್ವೇಷಿ ..
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
nimma abhipraya