ಶನಿವಾರ, ಸೆಪ್ಟೆಂಬರ್ 8, 2012

ಅಕ್ಟೋಬರ್ ನ ಮಳೆ...

ಅಕ್ಟೋಬರ್ ನ ಮಳೆ...
ಅವಳ ನೆನಪಲ್ಲೀ..
ಸತ್ತ ಮೊದಲ ಪ್ರೀತಿಯ ಸಮಾಧಿಯ ಮೇಲೆ
ಕುಳಿತ ಅವಳ ಮನಸಿಗೆ
ನನ್ನ ಮಾತುಗಳು ಸಮಾಧಾನ ಅನಿಸಿರಬೆಕು.
ಬಿಟ್ಟು ಹೊಗಿದ್ದು ಮರೆತು
ಮತ್ತೆ ಸಿಕ್ಕಿದ್ದಕ್ಕೆ ಕೈ ಚಾಚಿದಳು.
ಮರೆಯದೆ ಮತ್ತೆ ನನ್ನ ಕರೆತಂದು
ಅದೇ ಜಾಗದಲ್ಲಿ ಒಂಟಿಯಾಗಿ ಬಿಟ್ಟು
ಹೊರಟು ಹೋದಳು.
ನನ್ನಂತೆಯೆ ಮತ್ತೆ ನನಗಾಗಿ
 ಯಾರೊ ಬರಬಹುದು ಎಂದು!,
ಇಂದಿಗೂ ಕಾಯುತ್ತಿರುವೆ!.
ಬೇರೆ ಯಾರು ಬಂದರೂ
 ಮನಸು ಮಾತ್ರ ಅವಳಂತೆ ಕೈ ಚಾಚುತ್ತಿಲ್ಲ!
  ಬಂದವರು ಯಾರೂ ಅವಳಾಗಿರಲಿಲ್ಲ!
                                                                                                                                    ~ಅನ್ವೆಷಿ~

    ನಿರಂತರ ...
ಯಾರೋ ಬರುತ್ತಾರೆ,ಇಷ್ಟವಾಗುತ್ತಾರೆ,
ಇಷ್ಟ ಪಡುತ್ತಾರೆ, ಕೆಲ ಕಾಲ ಇರುತ್ತಾರೆ,
ಮೊದಲು ಹೇಳುತ್ತಾ ನಂತರ ಕೇಳುತ್ತಾ,
ಅರ್ಥ ಮಾಡಿಸುತ್ತಾ, ಅರ್ಥವಾಗುತ್ತಾ,
 ಭಾವನೆಗಳ ತೋಟ ಬಿತ್ತುತ್ತಾರೆ,
ಕನಸುಗಳು ಹೂವಾಗಿ ಅರಳಲು,
ಮನದ ಗೋಡೆಯ ಮೇಲೆ ಕುಳಿತು
ಮುಳ್ಳಿನ ನೆಪವೊಡ್ಡಿ,
ಹೇಳದೆ ಕೇಳದೆ ದೂರುತ್ತಾ ದೂರವಾಗುತ್ತಾರೆ!
ಸತ್ತು ಹೋದ ಕನಸುಗಳ ಕೆಳಗೆ
ಒಣಗಿದರೂ ನೊಯುವ ಗಾಯದ ಹಾಗೆ,
ಸಾಯದೆ ಉಳಿದ ನೆನಪುಗಳಾಗಿ,
ಕಂಬನಿಯ ಮೌಲ್ಯ ಕಂಗಳಿಗೆ ತಿಳಿಸುತಾ,
ಮತ್ತೆ ಬರುವವರಿಗಾಗಿ ಎದುರು ನೊಡುವ ಬದುಕೆ,
ನಿನ್ನ ತಾಳ್ಮೆಗೆ ಎನೆಂದು ಉತ್ತರಿಸಲಿ?!.
                                               ~ಅನ್ವೆಷಿ~

ಶನಿವಾರ, ಜುಲೈ 28, 2012

ಸುಮ್ಮನೆ ಯಾಕೆ ಬಂದೆ ನೀ ನನ್ನ ಕಣ್ಣಮುಂದೆ ...

       ಸುಮ್ಮನೆ ಯಾಕೆ ಬಂದೆ ನೀ ನನ್ನ ಕಣ್ಣಮುಂದೆ ...
ಸುಮ್ಮನೆ ಯಾಕೆ ಬಂದೇ... 
 ಈ ಪ್ರೀತಿನೆ ಹಾಗೆ ಒಂದು ದಿನದ ಒಂದು ಕ್ಷಣದ ಸೆಲೆಬ್ರೇಶನ್ ಅಲ್ಲ ..!
ಅದು ಪ್ರತೀ ಕ್ಷಣ ಹುಟ್ಟುವ ಮತ್ತೆ ಮತ್ತೆ ಬೆಳೆಯುವ 
ಜೀವಂತ ಹೂವಿನ ಬಳ್ಳಿಯಂಥದ್ದು...! 
ನಮ್ಮೊಳಗಿನ ಪ್ರೀತಿ ಮುಗಿದ ದಿನ ನಾವು ಖಂಡಿತಾ ಬದುಕಿರುವದಿಲ್ಲ ...?ನನ್ನ ಒಲವೇ...

        ಒಂದು ತಿರಸ್ಕ್ರತ ಪ್ರೀತಿಯು ಕೂಡಾ  ನಮ್ಮನ್ನು 
ಮತ್ತೆ ಮತ್ತೆ ಮಧುರವಾಗಿ ಕಾಡುತ್ತಾ ..
ಕೊಲ್ಲುತ್ತಿರುತ್ತದೆ..
ಆದರೂ ಪ್ರತಿಕ್ಷಣ ನಮ್ಮೊಳಗೇ ಜೀವಂತವಾಗಿದ್ದು  
ನೋವಲ್ಲು ಕೂಡಾ ನಗುವುದನ್ನು ಕಲಿಸುತ್ತಾ 
ಮತ್ತೆ ಮತ್ತೆ ಬದುಕುವ ಹಾಗೆಮಾಡುತ್ತದೆ...
ಯಾಕೆ ಗೊತ್ತ...?
 ಸಾವಿನಾಚೆಗೂ ಯಾವುದೋ ಒಂದು ಬದುಕು ನಮ್ಮನ್ನು ಕೈಬೀಸಿ 
ಕರೆಯುತ್ತಿರುತ್ತದೆ ಅನ್ನುವ ನಂಬಿಕೆಯೊಂದಿಗೆ  ....
ಅಲ್ವಾ....?                                                     ಇಂತೀ ನಿನ್ನ ಪ್ರೀತಿಯ 
                                                                               ಅನ್ವೇಷೀ...

ಬುಧವಾರ, ಜುಲೈ 25, 2012

ನೀ ನಡೆವ ಹಾದಿಯಲ್ಲಿ ...

 ನೀ ನಡೆವ ಹಾದಿಯಲ್ಲಿ ...
ಗೆಳತೀ ನೀ ನಡೆದು ಹೋದ ದಾರಿಯಲ್ಲಿ ..
ಉಳಿದು ಹೋದ ಹೆಜ್ಜೆ ಗುರುತುಗಳು ...
ನೊಂದ ಹೃದಯದ ನಿಟ್ಟುಸಿರು.. 
ತುಂತುರು ಮಳೆಯಲ್ಲಿ ಬೆರೆತು ಹೋಗಿವೆ ..
ಜಾರಿದ ಕಂಬನಿಯ ಹನಿಗಳು ..
ನಿನ್ನ ಅಂತರಂಗದ ಊರಿನಲ್ಲಿ ..ಗೆಳತೀ 
 ದಿಕ್ಕು ತಪ್ಪಿ ಅಲೆಯುತಿದೆ ಹುಚ್ಚು ಮನಸು ...
 ಮತ್ತೆ ಮತ್ತೆ ಹುಡುಕುತಿದೆ ಕಳೆದುಕೊಂಡ ನಿನ್ನ ಕನಸು ..
ಅಪಸ್ವರ ದ ವೀಣೆಯ ರಾಗ ...
ರಾಗವಿದು ವೀಣೆಯಿಂದ ದೂರ ಸರಿದಂತೆ ...
ಅರ್ಧ ನುಡಿದ ಸ್ವರವೂ ಎಲ್ಲೋ ಮರೆತು ಹೋದಂತೆ ..
 ಕವಿತೆಯ ಕೊನೆಯ ಸಾಲು ಅದು ಎಲ್ಲೋ ಮನದಿ ಕಳೆದು ಹೋಗಿ ...
ಕಲ್ಪನೆಯ ಬಾಗಿಲಾಚೆಯೇ ನಿಂತು ...ಗೆಳತೀ ..
    "ನೀನೇಕೆ ಹೀಗೆ ಹೇಳದೆ ಹೋದೆ ...ಒಂದು ಕಾರಣವೂ ಹೇಳದೆ "
ಎಂದು ಮತ್ತೆ ಮತ್ತೆ ಕೇಳಿದಂತೆ ,,,,,?????
                                  ಇಂತಿ ನಿನ್ನ ಪ್ರೀತಿಯ ...
                                                                                   ಅನ್ವೇಷಿ ....

ಈ ಪ್ರೀತಿ ಒಂಥರಾ ...

ನಿನಗಾಗೀ 
ಈ ಪ್ರೀತಿ ಒಂಥರಾ ...
ಈ ಪ್ರೀತಿ ಕೂಡಾ ಋತುವಿನ ಹಾಗೆ ...
ಇಂದು ಬಿಸಿಲಾದರೆ ನಾಳೆ ತುಂತುರು ಮಳೆಯ ಹಾಗೆ ...
ಇವುಗಳ ನಡುವೆ ಮೂಡಿದೆ ಕಾಮನಬಿಲ್ಲಿನಂತೆ ಆಸೆ ...
ಕ್ಷಣದ ಸುಖ ಮರು ಕ್ಷಣದ ವಿಷಾದ ದ ಹಾಗೆ ..
ಕರಗಿ ಹೋಗಿದೆ ಬದುಕು ...
ಒಂದು ಹಗಲು ಕನಸಿನಂತೆ...                                                                                
ನೆರಳಿನ ಆಟ 

ನಮ್ಮನ್ನು ಬಿಟ್ಟು ಹೋಗುವವರು ಯಾವಾಗಲು ನೆನಪುಗಳನ್ನು ಕೊಂದು ಹಾಕಿ ಹೋಗುತ್ತಾರೆ 
ಆದರೆ ಉಳಿದು ಹೋದವರಿಗೆ ಮಾತ್ರ ಬೀಟ್ಟು  ಹೋದವರ ನೆನಪುಗಳೇ ...
ಒಂದು ಶಾಪದಂತೆ ಕಾಡುತ್ತಾ ಮತ್ತೊಂದು ಕಡೆ ಬದುಕಿಗೆ ಆಸರೆಯಾಗಿ ಬಿಡುತ್ತವೆ...
ಒಂದು ಮಾಯದ ನೆನಪಿನ ಗಾಯದಂತೆ...ಅಲ್ಲವಾ ಗೆಳತೀ ...
ರಾಗವು ನಿನ್ನದೇ ಗೆಳತೀ ...ನನ್ನೆದೆಯ ವೀಣೆಯ ತಂತಿಯ ಮುರಿದು ...
ಮತ್ತೆ ಯಾರದೋ ಹೃದಯದ ತಾಳಕ್ಕೆ ಶ್ರುತೀಯಾಗಲು 
ನೀ ಹೊರತು ಹೋದೆ ... 
ನನ್ನ ಎದೆಯಲ್ಲಿ ನಿನ್ನ ಹೆಜ್ಜೆ ಗುರುತಿನ ಜೊತೆಗೆ ನಿನ್ನ ಗೆಜ್ಜೆಯಾ ನಾದವನ್ನು ತುಂಬಿ ಹೋದೆ ...
 ಗುರುತು ಅಳಿಸಿದರು ನಾದವೇ ಕಾಡುತಿದೆ ... 
ನಿನ್ನ ಒಲವೇ ಮಿಡಿಯುತಿದೆ... 
ಒಂದು ಅಪಸ್ವರದಂತೆ...

                                                                                                                                                                                                                                                             ಇಂತಿ ನಿನ್ನ  ಪ್ರೀತಿಯ ..
                                                                                      ಅನ್ವೇಷಿ ..

ಸೋಮವಾರ, ಜುಲೈ 23, 2012

ಮಾತಿನಿಂದ ಮೌನದವರೆಗೂ ....

ನಲ್ಲೆ ಒಮ್ಮೆ ತಿರುಗಿ ನೋಡು 
ಮಾತಿನಿಂದ ಮೌನದವರೆಗೂ ....
ಪ್ರೀತಿಯೆಂದರೆ ಅರಿವಿಲ್ಲದೆ ಪ್ರೀತಿಸಿದಳು 
ಪ್ರೀತಿಯಿಂದಲೇ ಪ್ರೀತಿಯನ್ನ ಬಿಟ್ಟವಳು ...ಕೊನೆಗೆ ಪ್ರೀತಿಯೇ 
ಇಲ್ಲವೆಂದು ವಾದಿಸಿದಳು ...
                                  ಪ್ರತಿಸಾರಿಯೂ  ಪ್ರೀತಿಸುತ್ತಲೇ ಪ್ರೀತಿಗಾಗಿ 
                                         ಪರಿ ಪರಿಯಾಗಿ ಹಂಬಲಿಸಿದಳು ...                  
                               ಆದರೂ ಪ್ರೀತಿಯೆಂದರೆ ಏನೆಂದು ಅರಿಯದೆ  ಹೋದಳು...!
ಮೊದಲು ನನ್ನಲ್ಲಿ ಏನನ್ನು ಕಂಡು ಇಷ್ಟ ಪಟ್ಟಳೋ
              ಕೊನೆಗೆ ನನ್ನ ಬಿಟ್ಟು ಹೋಗಲು ಅದೇ ಕಾರಣವ ಕೊಟ್ಟು ಹೋದಳು ...
ಪ್ರತಿಸಾರಿಯೂ ನನ್ನ ಮೊದಲ ಮಾತೆ ಅವಳ ಕೊನೆಯ ಮಾತಗಿರುತ್ತಿತ್ತು ...
ಆದರು ಮೌನವನ್ನೇ ಉಡುಗೊರೆಯಾಗಿ ಕೊಟ್ಟು ಹೋದಳು ..
ನೋಡದೇನೆ ಪ್ರೀತಿ ಮಾಡಿದಳು ಕೊನೆಗೆ ನೋಡಿಯು ನೋಡದ ಹಾಗೆ ಹೊರಟು  ಹೋದಳು...
ನಿನಗಾಗಿ 
                  ಪ್ರೀತಿಸುತ್ತಲೇ ತಬ್ಬಿದಳು ...ಹೃದಯದಲ್ಲಿ ಜಾಗ ಕೊಟ್ಟಳು ...
ಬದುಕಿನಲ್ಲಿ ಒಂಟಿಯಾಗಿ ಬಿಟ್ಟು ..ದೂರದಲ್ಲೇ ಸಾಗಿ ಬರುವೆ ಅಂದಳು ...
ಬದುಕು ಎರಡು ಚಕ್ರಗಳ ಗಾಡಿ ಅಂದೇ...
ಅಲ್ಲಾ ಎರಡು ಹಳಿಗಳ ಕಂಬಿ ಅಂದಳು...
ಇಂದಿಗೂ ಸಾಗಿದೆ ಬದುಕಿನ ಬಂಡಿ ...
ಅಲ್ಲಿ ಅವಳು ಇಲ್ಲಿ ನಾನು...ಕಳಚದೆ ಇರಲಿ ನಮ್ಮ ಒಲವಿನ ಕೊಂಡಿ...
                                        ಅವಳದೇ ನೆನಪಲ್ಲಿ ಈ ಸಾಲುಗಳು ...
                                        ಇಂತಿ ಅವಳ ನೆನಪಲ್ಲಿ ...
                                                                         ಅನ್ವೇಷಿ 

ಅವಳೊಂದಿಗೆ ಆ ದಿನಗಳು ...

ಮೊದಲ ನೋಟ 
 ಅವಳೊಂದಿಗೆ ಆ ದಿನಗಳು ...
ಅಂದು ಅವಳು ಯಾರೋ ಗೊತ್ತಿರಲಿಲ್ಲ ಆದರೆ ಇಂದು ಅವಳೇ 
ಎಲ್ಲವೂ ಆಗಿ ಹೋಗಿದ್ದಾಳೆ 
ಅರಿಯದೆ ಕರೆಯದೆ ...ಹೇಳಿದರೂ ಕೇಳದೆ  
ಬಂದು ನನ್ನ ಬದುಕಿನ ಬಂಡಿ ಏರಿದಳು ...
ಇಂದು ಅವಳ ನೆನಪುಗಳಿಲ್ಲದೇ  ಬದುಕು ಸಾಗುತ್ತಿಲ್ಲ ...
ಎಲ್ಲಿ ಹುಡುಕಿದರೂ ಎಷ್ಟು ಕಾಡಿ ಬೇಡಿದರೂ  
ಅವಳ ಬದುಕಿನ ಕನ್ನಡಿ ನನಗೆ ಕಾಣುತ್ತಿಲ್ಲ ..
ಆದರು ಮನದ ತುಮ್ಬಾವಲದೆ ಹೆಜ್ಜೆ ಉಳಿಸಿ ಹೋದಳಲ್ಲ ...
ಏನು ಮಾಡಿದರೂ ಅಳಿಸಲು ಆಗುತ್ತಿಲ್ಲ ....
ವಿರಹದ ಕಂಬನಿ 
                 ಅವಳು ಬರಿ ಅವಳು ಮಾತ್ರ ಅಂದುಕೊಂಡೆ ಆದರೆ ಅವಳೇ ನನಗೆ ಎಲ್ಲವು ಆಗುತ್ತಾ ...
ನನ್ನ ಖಾಲಿ ಮನದ ತುಂಬಾ ಪ್ರತಿ ಮೂಲೆಯನ್ನೂ ತನ್ನ ನೆನಪಿನ ಧೂಳಿನಿಂದ ತುಂಬಿ ಹೋದಳು ...
 ನೋಡದೆ ಮಾತಾಡುವಾಗ ಪೆದ್ದು ಅಂದುಕೊಂಡೆ ...ನೋಡಿದ ಮೇಲೆ ಮುದ್ದು ಅಂದುಕೊಂಡೆ ...
ಪ್ರತಿಯೊಂದರಲ್ಲೂ ಹೊಸತನ್ನು ಹುಡುಕುತ್ತಾ ...ನನ್ನಲ್ಲಿ ಅಚ್ಚರಿಯ ಹುಟ್ಟಿಸಿ ಮನದ ಖಾಲಿ ಕಾಗದದ ಮೇಲೆ ತನ್ನ ನಗುವಿನ ಚಿತ್ತಾರ ತುಂಬಿ ನಿಂತಳು ...                                      ಪ್ರತಿ ಉಸಿರಲ್ಲೂ ಹೆಸರು ಉಳಿಸಿ 
ನಿಟ್ಟುಸಿರಿನಲ್ಲಿಯೇ ಕರಗಿ ಹೋದಳು ...
ಗುಪ್ತಗಾಮಿನಿಯಂತೆ ಬಂದು ಶಾಲ್ಮಲೆಯಾಗಿ ತುಂಬಿ ತುಳುಕುತ್ತಾ  ಭಾಗಿರತಿಯಂತೆ ಹರಿದು ಹೋದಳು ... 
ಬದುಕಿನ ದಡದಲ್ಲಿ ಮರೆಯದೆ ಉಳಿಸಿ ಹೋದ ಹೆಜ್ಜೆಯ ಗುರುತುಗಳನ್ನು ನೋಡುತ್ತಾ 
ಮತ್ತೆ ಬರುವ ಅವಳಿಗಾಗಿ ನಿರೀಕ್ಷೆಯ ಉಸಿರಲ್ಲಿ ಕಾಯುತ್ತಿರುವ 
ನಾನು ಯಾರು ...?

                                                                   ಇಂತಿ ನಿನ್ನ ...ಪ್ರೀತಿಸಿದ 
                                                                                                       ಅನಾಮಿಕ