![]() |
ಅಕ್ಟೋಬರ್ ನ ಮಳೆ... |
ಸತ್ತ ಮೊದಲ ಪ್ರೀತಿಯ ಸಮಾಧಿಯ ಮೇಲೆ
ಕುಳಿತ ಅವಳ ಮನಸಿಗೆ
ನನ್ನ ಮಾತುಗಳು ಸಮಾಧಾನ ಅನಿಸಿರಬೆಕು.
ಬಿಟ್ಟು ಹೊಗಿದ್ದು ಮರೆತು
ಮತ್ತೆ ಸಿಕ್ಕಿದ್ದಕ್ಕೆ ಕೈ ಚಾಚಿದಳು.
ಮರೆಯದೆ ಮತ್ತೆ ನನ್ನ ಕರೆತಂದು
ಅದೇ ಜಾಗದಲ್ಲಿ ಒಂಟಿಯಾಗಿ ಬಿಟ್ಟು
ಹೊರಟು ಹೋದಳು.
ನನ್ನಂತೆಯೆ ಮತ್ತೆ ನನಗಾಗಿ
ಯಾರೊ ಬರಬಹುದು ಎಂದು!,
ಇಂದಿಗೂ ಕಾಯುತ್ತಿರುವೆ!.
ಬೇರೆ ಯಾರು ಬಂದರೂ
ಬಂದವರು ಯಾರೂ ಅವಳಾಗಿರಲಿಲ್ಲ!
~ಅನ್ವೆಷಿ~
ನಿರಂತರ ...
ಯಾರೋ ಬರುತ್ತಾರೆ,ಇಷ್ಟವಾಗುತ್ತಾರೆ,
ಇಷ್ಟ ಪಡುತ್ತಾರೆ, ಕೆಲ ಕಾಲ ಇರುತ್ತಾರೆ,
ಮೊದಲು ಹೇಳುತ್ತಾ ನಂತರ ಕೇಳುತ್ತಾ,
ಅರ್ಥ ಮಾಡಿಸುತ್ತಾ, ಅರ್ಥವಾಗುತ್ತಾ,
ಭಾವನೆಗಳ ತೋಟ ಬಿತ್ತುತ್ತಾರೆ,
ಕನಸುಗಳು ಹೂವಾಗಿ ಅರಳಲು,
ಮನದ ಗೋಡೆಯ ಮೇಲೆ ಕುಳಿತು
ಮುಳ್ಳಿನ ನೆಪವೊಡ್ಡಿ,
ಹೇಳದೆ ಕೇಳದೆ ದೂರುತ್ತಾ ದೂರವಾಗುತ್ತಾರೆ!
ಸತ್ತು ಹೋದ ಕನಸುಗಳ ಕೆಳಗೆ
ಒಣಗಿದರೂ ನೊಯುವ ಗಾಯದ ಹಾಗೆ,
ಸಾಯದೆ ಉಳಿದ ನೆನಪುಗಳಾಗಿ,
ಕಂಬನಿಯ ಮೌಲ್ಯ ಕಂಗಳಿಗೆ ತಿಳಿಸುತಾ,
ಮತ್ತೆ ಬರುವವರಿಗಾಗಿ ಎದುರು ನೊಡುವ ಬದುಕೆ,
ನಿನ್ನ ತಾಳ್ಮೆಗೆ ಎನೆಂದು ಉತ್ತರಿಸಲಿ?!.
~ಅನ್ವೆಷಿ~
tumbaa chennagide bro.
ಪ್ರತ್ಯುತ್ತರಅಳಿಸಿ